Live Sunday, October 25, 2026
Font Size:
ಸುದ್ದಿ 1 min read 37 Views
Sep 24, 2026

ಹನುಮನಹಳ್ಳಿ ಬಳಿ ವಾಲಿದ ವಿದ್ಯುತ್ ಕಂಬಗಳು: ಕಳಪೆ ಕಾಮಗಾರಿ ಆರೋಪ

ಹನುಮನಹಳ್ಳಿ ಬಳಿ ವಾಲಿದ ವಿದ್ಯುತ್ ಕಂಬಗಳು: ಕಳಪೆ ಕಾಮಗಾರಿ ಆರೋಪ
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಮಧುಗಿರಿ: ದೊಡ್ಡೇರಿ ಹೋಬಳಿಯ ಹನುಮನಹಳ್ಳಿ ಗ್ರಾಮದ ಸಮೀಪ 2–3 ತಿಂಗಳ ಹಿಂದೆ ಪೂರ್ಣಗೊಂಡಿರುವ ಹೊಸ ಲಿಂಕ್‌ಲೈನ್ ಕಾಮಗಾರಿಯ ವಿದ್ಯುತ್ ಕಂಬಗಳು ಇದೀಗ ವಾಲಿರುವುದು ಕಂಡುಬಂದಿದೆ. ಪ್ರಸ್ತುತ ಈ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಇಲ್ಲದಿದ್ದರೂ, ಕಂಬಗಳ ಸ್ಥಿತಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಅರ್ಹ ಗುತ್ತಿಗೆದಾರರಿಗೆ ಕಾಮಗಾರಿ ನೀಡದೆ, ಹಣ ನೀಡುವವರಿಗೆ ಹಾಗೂ ತಮಗೆ ಬೇಕಾದವರಿಗೆ ಕಾಮಗಾರಿ ನೀಡುತ್ತಿರುವುದರಿಂದ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂದು ಗುತ್ತಿಗೆದಾರ ಸಿರಾ ಶ್ರೀನಿವಾಸ್ ಆರೋಪಿಸಿದ್ದಾರೆ.

ಮಧುಗಿರಿ ವಿಭಾಗದ ಇಇ ಜಗದೀಶ್ ಅವರು ಕಳೆದ ಒಂದು ವರ್ಷದಿಂದ ಅರ್ಹ ಗುತ್ತಿಗೆದಾರರಿಗೆ ಕಾಮಗಾರಿ ನೀಡದೆ, ಕಚೇರಿಗೆ ಪ್ರವೇಶಿಸುವುದಕ್ಕೂ ನಿರ್ಬಂಧ ಹೇರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹಣದ ಆಸೆಯಿಂದ ಅರ್ಹತೆ ಇಲ್ಲದವರಿಗೂ ಕಾಮಗಾರಿ ನೀಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಗುಣಮಟ್ಟದ ಕಾಮಗಾರಿ ಖಚಿತಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.